ಸಿಲ್ವರ್ ಫ಼ೆದರ್ ಲಾಂಛನದಲ್ಲಿ ‘ಗರ್ವ ವೆಂಕಟೇಶ್, ಟಿ.ಎನ್.ನಾಗೇಶ್ ಮತ್ತು ಮುರಳಿಕೃಷ್ಣ ಅವರು ನಿರ್ಮಿಸುತ್ತಿರುವ ‘ಜಾಲಿ ಬಾರು ಮತ್ತು ಪೋಲಿ ಹುಡುಗರು ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
ಬೆಂಗಳೂರು, ಮೈಸೂರು, ಕೆ.ಆರ್.ಪೇಟೆ ಮುಂತಾದ ಕಡೆ ಚಿತ್ರಕ್ಕೆ ಎರಡು ಹಾಡು, ಕ್ಲೈಮ್ಯಾಕ್ಸ್ ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆದಿದೆ.
ಹಿಂದೆ ‘ಕಾರಂಜಿ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಧರ್ ಈ ಚಿತ್ರದ ನಿರ್ದೇಶಕರು. ವಿಷ್ಣುವರ್ಧನ್ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ನಿರ್ದೇಶನ, ಸನತ್-ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಹರ್ಷ, ಮುರಳಿ, ರಘು ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ(ಮದರಂಗಿ), ಮಾನ್ಸಿ, ಮಾನಸಿ, ಕಲ್ಯಾಣಿ, ಮೈಕೋನಾಗರಾಜ್, ಜಹಂಗೀರ್, ಮಾಧವ, ಶ್ರೇಯಸ್, ವಿಜಯಗೋಪಾಲ್, ಸೌಜನ್ಯ, ಮಾನಸಶೆಟ್ಟಿ ಮುಂತಾದವರಿದ್ದಾರೆ.